ಪ್ರಾಚಾರ್ಯರ ಮುನ್ನುಡಿ
ಪ್ರೀತಿಯ ವಿದ್ಯಾರ್ಥಿಗಳೆ,
ಮಲೆನಾಡಿನ ಸುಸಜ್ಜಿತ ಸುಂದರ ಪ್ರತಿಷ್ಠ್ಟಿತ ಕಾಲೇಜುಗಳಲ್ಲಿ ಒಂದಾದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, 2017 ರಿಂದ ಸಹ್ಯಾದ್ರಿ ಕಲಾ ಕಾಲೇಜಿನಿಂದ ಬೇರ್ಪಟ್ಟು ಸ್ವತಂತ್ರ ಅಸ್ತಿತ್ವ ಪಡೆದುಕೊಂಡಿದೆ. 80 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಕಾಲೇಜು ಅಮೃತ ಮಹೋತ್ಸವದಿಂದ ಶತಮಾನೋತ್ಸವದತ್ತ ಸಾಗುತ್ತಿದೆ. ಇಲ್ಲಿ ಓದಿರುವ ವಿದ್ಯಾರ್ಥಿಗಳು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಜವಾಬ್ದಾರಿಯುತ ಸ್ಥಾನವನ್ನಲಂಕರಿಸಿದ್ದಾರೆ. ನ್ಯಾಯ ಮೂರ್ತಿಗಳಾಗಿ, ಪ್ರಾಧ್ಯಾಪಕರಾಗಿ, ಚಲನಚಿತ್ರ ಕಲಾವಿದರಾಗಿ, ಚಾರ್ಟಡ್ ಅಕೌಂಟೆಟ್ಗಳಾಗಿ, ಬ್ಯಾಂಕ್ ಉದ್ಯೋಗಿಗಳಾಗಿ, ಕಾರ್ಪೋರೇಟ್ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ
ನಮ್ಮ ಕಾಲೇಜಿನಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿಗಳಾದ ಬಿ.ಕಾಂ., ಬಿ.ಬಿ.ಎ., ಬಿ.ಬಿ.ಎ. (ಟಿಟಿಎಂ), ಎಂ.ಕಾಂ., ಎಂ.ಬಿ.ಎ. ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲು ಇಲ್ಲಿ ಅನುಕೂಲಗಳಿವೆ. ವ್ಯಾಪಾರ, ವಾಣಿಜ್ಯ ಅಧ್ಯಯನಗಳು ಮಹತ್ವ ಪಡೆಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಕಾಲೇಜು ಆ ಎಲ್ಲ ಅಗತ್ಯಗಳನ್ನು ಮನಗಂಡು ಬೋಧನಾ ಕಾರ್ಯದಲ್ಲಿ ನಿರತವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದ್ದು ಹಲವಾರು ರ್ಯಾಂಕ್ಗಳು ನಮ್ಮ ಕಾಲೇಜಿಗೆ ಬಂದಿವೆ. ಇ-ಆಡಳಿತಕ್ಕೆ ಮಹತ್ವ ದೊರೆಯುತ್ತಿರುವ ಇಂದಿನ ಸನ್ನಿವೇಶದಲ್ಲಿ ವಿದ್ಯಾರ್ಥಿ ವೇತನ, ಪರೀಕ್ಷೆ, ಫಲಿತಾಂಶ ಮೊದಲಾದವುಗಳನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸುವ ದಕ್ಷ ಬೋಧಕೇತರ ಸಿಬ್ಬಂದಿಗಳಿದ್ದಾರೆ.
ಕೋವಿಡ್ನ ಸಂಕಷ್ಟದ ಕಾಲದಲ್ಲಿಯೂ ನಮ್ಮ ಅಧ್ಯಾಪಕರ ವೃಂದ ಆನ್ಲೈನ್ ತರತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ ವಿದ್ಯಾರ್ಥಿಗಳ, ಪೋಷಕರ ಪ್ರಶಂಸೆಗೆ ಪಾತ್ರವಾಗಿದೆ. ವಿಚಾರಸಂಕಿರಣ, ಕಾರ್ಯಾಗಾರ, ಗೋಷ್ಠಿ, ಕಮ್ಮಟ, ತರಬೇತಿ ಶಿಬಿರಗಳನ್ನು ನಡೆಸಿ ಜ್ಞಾನ ಪ್ರಸರಣ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುವ ಕಾರ್ಯವನ್ನು ಮಾಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಪ್ರಸ್ತುತ ನಮ್ಮ ಕಾಲೇಜು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ, ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಹೆಚ್ಚು ಸಕ್ರಿಯವಾಗಿದೆ.
ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ನಮ್ಮ ಕಾಲೇಜಿನಲ್ಲಿ ಅತ್ಯುತ್ತಮ ಅವಕಾಶಗಳಿವೆ. ನುರಿತ, ಅನುಭವಿ, ಶೈಕ್ಷಣಿಕ ಉನ್ನತಿ ಪಡೆದ ಪ್ರಾಧ್ಯಾಪಕ ವೃಂದ, ಕ್ರಿಯಾಶೀಲ ಬೋಧಕೇತರ ಸಿಬ್ಬಂದಿ ವರ್ಗ, ಸುಸಜ್ಜಿತ ಪ್ರತ್ಯೇಕ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಗಣಕೀಕೃತ ತರಗತಿ ಕೊಠಡಿಗಳು, ಸಭಾಂಗಣದ ಜೊತೆಗೆ ವಿಶಾಲವಾದ ಉದ್ಯಾನವನ, ಕ್ಯಾಂಟೀನ್, ಹಾಸ್ಟೆಲ್ ಇತ್ಯಾದಿ ಎಲ್ಲ ಮೂಲಭೂತ ಸೌರ್ಯಗಳಿಂದ ಶ್ರೇಷ್ಠ ಶೈಕ್ಷಣಿಕ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ವಿವಿಧ ಘಟಕಗಳು, ವೇದಿಕೆಗಳು, ಕ್ರೀಡಾ ವಿಭಾಗ, ಎನ್.ಎಸ್.ಎಸ್., ಎನ್.ಸಿ.ಸಿ., ರೋರ್ಸ್ ಮತ್ತು ರೇಂರ್ಸ್ಸ ಘಟಕಗಳು, ರೆಡ್ಕ್ರಾಸ್, ರೆಡ್ರಿಬ್ಬನ್ ಕ್ಲಬ್, ಸಾಂಸ್ಕೃತಿಕ ವೇದಿಕೆ, ಮಹಿಳಾ ಸಬಲೀಕರಣ ಘಟಕ, ನುಡಿ ಮಂಟಪ ಸಾಹಿತ್ಯ ವೇದಿಕೆ ಮೊದಲಾದವು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಭರವಸೆ, ದೇಶಪ್ರೇಮ, ಸಾಮಾಜಿಕ ಕಳಕಳಿ, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುವ ಗುಣ, ಸಹೃದಯತೆ, ಸೌಹಾರ್ದತೆ ಬೆಳೆಯಲು ಸಾಧ್ಯವಾಗುತ್ತದೆ. ನಮ್ಮ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 2018-19 ಮತ್ತು 2019-20, 2023-24ರಲ್ಲಿ ದೆಹಲಿಯ ಗಣರಾಜೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿತಂದಿದ್ದಾರೆ. ಕ್ರೀಡೆಯಲ್ಲಿ ರಾಷ್ಟ್ರೀಯ, ಆಂತಾರಾಷ್ಟ್ರೀಯ ಸಾಧನೆಯನ್ನು ಮಾಡಿದ್ದಾರೆ.
ಶೈಕ್ಷಣಿಕ ವರ್ಷ 2025-26ರ ಪ್ರವೇಶ ಪ್ರಕ್ರಿಯೆಯು ಆನ್ ಲೈನ್ ಮಾದರಿಗೆ ಒಳಪಟ್ಟಿದ್ದು ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಲು ಸೂಚಿಸುತ್ತ, ಉನ್ನತ ಗುರಿ ಉದ್ದೇಶದ ಮೂಲಕ ವಿಶಿಷ್ಠ ಸಾಧನೆ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ, ನಮ್ಮ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಮಾನವೀಯ ಮೌಲ್ಯ ಹಾಗೂ ಕೌಶಲ್ಯವನ್ನು ಹೊಂದಿ ಶ್ರೇಷ್ಠ ಹುದ್ದೆಯನ್ನು ಅಲಂಕರಿಸುವAತಾಗಲಿ ಎಂದು ಆಶಿಸುತ್ತೇನೆ.
ಡಾ.ಅವಿನಾಶ್ ಟಿ
ಪ್ರಾಚಾರ್ಯರು
Admission Help Desk
(+91) 98441 77133
FACILITIES

MODERN CLASS ROOMS
SCMC has well furnished lecture hall equipped with audiovisual equipments.

LIBRARY AND INFORMATION CENTRE
One of the best places in our campus that we can boast of is our Library.

HIGH TECH AUDITORIUM
The college has well furnished A/C Auditorium, which is equipped with state-of-the-art audio visual.

TRANSPORTATION
Our fleet of 10 college buses is at the disposal of the students for every transportation need

HOSTEL FACILITY
Hostels are a home away from home. We at institute provide you a decent stay.

Cafeteria
The Canteen located in the campus provides ambience to not only eat but also to exchange ideas.