Admission Details
Online Admission Procedure (SEP -2024 Scheme)
1. The eligible candidates shall submit their online application through UUCMS PORTAL
2. The college admission committee scrutinizes the online application and an Online Invite is sent to the respective candidates
3. Online verification of the documents
4. Online Fee Payment
5. Submission of Undertaking Form
6. The institution appoints Nodal Officer for smooth admission process in the beginning Of the Academic Year
7. Publishing of the University Academic Calendar regarding Admission Dates
8. Preparation of UUCMS Portal (setting maximum strength, Course Mapping, Fee Structure Mapping and so on)
9. Help Desk formed to assist students in taking respective course
10. Admission Committee is formed for overseeing of the admission process
Documents to be submitted at the time of submitting duly filled in Application Form
1. Duly filled Online Application in UUCMSLink: https://uucms.karnataka.gov.in/login/index
2. Documents to be Uploaded;
• Marks Cards• Adhar Card
• Caste & Income Certificate
• E-Photos
• E-signature
• Transfer Certificate
3. Undertaking (regarding Discipline in the Campus & Wearing Uniform and Identity Card).
Documents to be produced at the time of admission
• Original Marks Card or Provisional marks card duly signed by the Head of the Institution.• T. C. Original + One Photocopy of the same.
• Caste Certificate : SC/ST ( Five Xerox copies)
• Income certificate ( 1 + 4 copies)
• Passport size photos – 4 and stamp size photo – 1
• Undertaking - 2 copies
• Form – I.D. Card format
Fee Structure – 2024-25
Fee structure will be announced at the time of admission/ academic year
ಪ್ರವೇಶ ಪಡೆಯಲು ಪಾಲಿಸಬೇಕಾದ ನಿಯಮಗಳು
- ಈ ಕಾಲೇಜಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಹ ಶಿಕ್ಷಣ ವ್ಯವಸ್ಥೆಇರುವುದರಿಂದ, ಸಮಾನ ಪ್ರವೇಶಕ್ಕೆ ಅವಕಾಶವಿರುತ್ತದೆ. ಸರ್ಕಾರದ ನಿಯಮಾನುಸಾರ ಮೆರಿಟ್ ಕಮ್ ರೋಸ್ಟರ್ ಮೂಲಕ ಪ್ರವೇಶವನ್ನು ಮಾಡಿಕೊಳ್ಳಲಾಗುವುದು.
- ಪ್ರಥಮ ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಬಿ.ಎ.(ಟೂರಿಸಂ & ಟ್ರಾವೆಲ್) ಪದವಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಎರಡನೇ ಪಿ.ಯು.ಸಿ. ಪರೀಕ್ಷೆಯಲ್ಲಿ ಪಾಸಾಗಿರಬೇಕು.
- ಜೆ.ಓ.ಸಿ/ಡಿಪ್ಲೊಮೊ ಮತ್ತು ಐಟಿಐ (2 ವರ್ಷ) ಕೋರ್ಸ್ಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಲಾಗುವುದು. (ಷರತ್ತಿಗೊಳಪಟ್ಟು)
- ಪ್ರಥಮ ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಬಿ.ಎ.(ಟೂರಿಸಂ & ಟ್ರಾವೆಲ್) ಸೇರುವ ವಿದ್ಯಾರ್ಥಿಗಳು, ONLINE ಅಲ್ಲಿ ಅರ್ಜಿಯನ್ನು ಈ ಕೆಳಗೆ ನಮೂದಿಸಿದ ದಾಖಲೆಗಳ ‘ದೃಢೀಕೃತ’ ಛಾಯಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು. ಹಾಗೂ ಪ್ರವೇಶಾತಿ ಸಂದರ್ಭದಲ್ಲಿ, ಅವುಗಳ ಮೂಲ ಪ್ರತಿಗಳನ್ನು ಹಾಜರುಪಡಿಸಬೇಕು.,
- ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಅಂಕ ಪಟ್ಟಿಗಳು
- ವರ್ಗಾವಣೆ ಪತ್ರ (ಟಿ.ಸಿ.)
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಸರ್ಕಾರಿ ಆದೇಶದಪ್ರಕಾರ ನಿಗದಿತ ನಮೂನೆಯಲ್ಲಿ ಮಾಡಿಸಿರಬೇಕು).
- ಆಧಾರ್‌ಕಾರ್ಡ್ ಪ್ರತಿ.
- ಹಿಂದೆ ವ್ಯಾಸಂಗ ಮಾಡಿದ ಶಾಲೆ / ಕಾಲೇಜಿನ ಪ್ರಾಚಾರ್ಯರಿಂದ ಪಡೆದ ಪ್ರಮಾಣ ಪತ್ರ
- ಒಂದು ವೇಳೆ ಪ್ರವೇಶ ಅರ್ಜಿಯೊಂದಿಗೆ ಸುಳ್ಳು ದಾಖಲೆಗಳನ್ನು ಲಗತ್ತಿಸಿ ಪ್ರವೇಶ ಪಡೆದು, ಅದು ಸುಳ್ಳೆಂದು ಸಾಬೀತಾದರೆ ಅಂತಹ ವಿದ್ಯಾರ್ಥಿಗಳ ಪ್ರವೇಶರದ್ದು ಪಡಿಸಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು.
- ಶೇಕಡ 1% ಸೀಟನ್ನು ಲೈಂಗಿಕ ಶೋಷಿತರು, ಸಾಗಣಿಕೆಗೊಳಪಟ್ಟವರು, ಕೌಟುಂಬಿಕ-ದೌರ್ಜನ್ಯ, ವರದಕ್ಷಣೆ ಕಿರುಕುಳದಿಂದ ನೊಂದವರು, ಆ್ಯಸಿಡ್ ದಾಳಿಗೆಗೊಳಪಟ್ಟ / ದಹಿಸಲ್ಪಟ್ಟ ಮಹಿಳೆಯರು, ದೇವದಾಸಿಯರು ಮತ್ತುಅವರ ಮಕ್ಕಳಿಗೆ ಸಂಬAಧಪಟ್ಟ ಪ್ರಾಧಿಕಾರಗಳು ವಿತರಿಸಿದ ನಿಗದಿತ ನಮೂನೆಯ ದೃಢೀಕರಣ ಪತ್ರವನ್ನು ಸಲ್ಲಿಸಿದ ವಿದ್ಯಾರ್ಥಿಗಳಿಗೆ ನೀಡಲಾಗುವುದು, ಅರ್ಹ ಅಭ್ಯಾರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಬೇರೆಯವರಿಗೆ ಇದನ್ನು ನೀಡಲು ಅವಕಾಶವಿರುವುದಿಲ್ಲ.
- ಬೇರೆ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದಿಂದ ಅರ್ಹತಾ ಪತ್ರ (Eligibility Certificate) ತರಬೇಕು.
- Tಶಿವಮೊಗ್ಗ ನಗರದ ಸ್ಥಳೀಯ ಕಾಲೇಜು ಬಿಟ್ಟು ಬಂದ ವಿದ್ಯಾರ್ಥಿಗಳಿಗೆ ಈ ಕಾಲೇಜಿನಲ್ಲಿ ಮರುಪ್ರವೇಶಕ್ಕೆ ಅವಕಾಶವಿರುವುದಿಲ್ಲ.
- ಶುಲ್ಕ ಮರುಭರಿಕೆ ಮತ್ತು ವಿದ್ಯಾರ್ಥಿ ವೇತನ ಹಣವನ್ನು ವಿದ್ಯಾರ್ಥಿಗಳಿಗೆ ಪಾವತಿಸಲು ಕೆನರಾ ಬ್ಯಾಂಕ್, ವಿದ್ಯಾನಗರ ಶಾಖೆ ಇಲ್ಲಿ ಬ್ಯಾಂಕ್ ಉಳಿತಾಯ ಖಾತೆ ತೆರೆಯುವುದು.
- ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಪಡೆಯಲು ಅವಕಾಶವಿದೆ.
- ವಿದ್ಯಾರ್ಥಿ/ವಿದ್ಯಾರ್ಥಿನಿಯರು ಗುರುತಿನ ಚೀಟಿ ಧರಿಸುವುದು ಕಡ್ಡಾಯವಾಗಿರುತ್ತದೆ. ಗುರುತಿನ ಚೀಟಿ ಧರಿಸದಿದ್ದರೆ ತರಗತಿಗಳಿಗೆ ಪ್ರವೇಶವಿರುವುದಿಲ್ಲ.
- ಹಾಜರಾತಿ ಶೇಕಡಾ 75 ಕಡ್ಡಾಯವಾಗಿರುತ್ತದೆ. ಇಲ್ಲದಿದ್ದರೆ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದಿಲ್ಲ.
- ಕಾಲೇಜಿನ ಆವರಣದಲ್ಲಿ/ತರಗತಿಯಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
- ವಿದ್ಯಾರ್ಥಿಗಳು ವಾಹನವನ್ನು ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ನಿಲ್ಲಿಸುವುದು.
- ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ರಾಜಕೀಯ, ಬಾಹ್ಯಶಕ್ತಿಗಳ ಬಳಕೆ, ಜಾತಿಯ ಚಟುವಟಿಕೆಗಳನ್ನು ನಡೆಸಬಾರದು.
- ನಿಯಮಗಳನ್ನು ಉಲ್ಲಂಘಿಸಿದ, ಅಶಿಸ್ತಿನಿಂದ ವರ್ತಿಸಿದ ವಿದ್ಯಾರ್ಥಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವ ಅಧಿಕಾರ ಕಾಲೇಜಿಗೆ ಇರುತ್ತದೆ.
- ವಿದ್ಯಾರ್ಥಿಗಳು ಪಠ್ಯಕ್ರಮದ ಬಗ್ಗೆ ಸಂದೇಹ ಇದ್ದರೆ ಆಯಾ ವಿಭಾಗದ ಮುಖ್ಯಸ್ಥರನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಿಗಾಗಿ ವಿದ್ಯಾರ್ಥಿ ಕ್ಷೇಮಪಾಲಕರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬೇಕು.
- ಕಾಲೇಜಿನಲ್ಲಿ ಶಿಸ್ತು ಮತ್ತು ಸಂಯಮ ಅಗತ್ಯವಾಗಿರುತ್ತದೆ.
- ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಎನ್.ಸಿ.ಸಿ. / ಎನ್.ಎಸ್.ಎಸ್. / ರೆಡ್‌ಕ್ರಾಸ್ / ರೋರ‍್ಸ್ ಅಂಡ್ ರೇಂರ‍್ಸ್ನಲ್ಲಿ ಸೇರಿಕೊಳ್ಳಲು ಅವಕಾಶವಿರುತ್ತದೆ.
- ಹಸಿರು ಕ್ಯಾಂಪಸ್ ನಿರ್ಮಾಣಕ್ಕೆ ಸಹಕಾರ ನೀಡುವುದು.
- ಕಾಲೇಜಿನ ಆವರಣದಲ್ಲಿ ರ‍್ಯಾಗಿಂಗ್ ಮಾಡುವುದು, ಇತರೆ ವಿದ್ಯಾರ್ಥಿಗಳಿಗೆ ತೊಂದರೆ ಕೊಡುವುದು, ಲೈಂಗಿಕ ಕಿರುಕುಳ, ಮಾನಸಿಕ ಕಿರುಕುಳ ಹಾಗೂ ಇತರ ವಿದ್ಯಾರ್ಥಿಗಳಿಗೆ ತೊಂದರೆ ನೀಡುವುದನ್ನು ನಿಷೇಧಿಸಲಾಗಿದೆ.
- ಕಾಲೇಜಿನ ಗೌರವಕ್ಕೆ ದಕ್ಕೆ ತರುವಂತಹ ಯಾವ ಕಾರ್ಯವನ್ನೂ ಮಾಡಬಾರದು.
- ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ, ಶಿಸ್ತು ಶಾಂತಿಯನ್ನು ಕಾಪಾಡಿಕೊಂಡು ಬರಬೇಕು.
- ಕಾಲೇಜಿನ ಆವರಣದಲ್ಲಿ ತಂಬಾಕು/ಮಾದಕ ವಸ್ತು/ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.
- ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸ್ಯಾನಿಟೈಸರ್ ಬಳಕೆಯ ಮೂಲಕ ಶುಚಿತ್ವ ಕಾಪಾಡಿಕೊಳ್ಳುವುದು.